Lifestyle : ಯಾವ ವಯಸ್ಸಿನವರು ಎಷ್ಟು ನಿದ್ರೆ ಮಾಡಬೇಕು ಎಂದು ತಿಳಿದುಕೊಳ್ಳಿರಿ...


👉 ಶಿಶುಗಳು

0 ರಿಂದ ಮೂರು ತಿಂಗಳ ಮಕ್ಕಳು 14 ರಿಂದ 17 ಗಂಟೆಗಳ ಕಾಲ ಮಲಗಬೇಕು. ಆಗ ಮೆದುಳಿನ ಬೆಳವಣಿಗೆ ಜತೆಗೆ ದೈಹಿಕ ಬೆಳವಣಿಗೆಯೂ ಚೆನ್ನಾಗಿರುತ್ತದೆ.


👉 4 ರಿಂದ 11 ತಿಂಗಳುಗಳು

ನಾಲ್ಕರಿಂದ 11 ತಿಂಗಳ ಮಕ್ಕಳು 12 ರಿಂದ 15 ಗಂಟೆಗಳ ಕಾಲ ಮಲಗಬೇಕು. ಹಾಗೆ ಮಲಗಿದರೆ ಅವರ ಬೆಳವಣಿಗೆ ಚೆನ್ನಾಗಿರುತ್ತದೆ.


👉 1-2 ವರ್ಷಗಳು

ಒಂದರಿಂದ ಎರಡು ವರ್ಷದ ಮಕ್ಕಳು ದಿನಕ್ಕೆ 11 ರಿಂದ 14 ಗಂಟೆಗಳ ಕಾಲ ಮಲಗಬೇಕು. ಬೆಳಗ್ಗೆ ಒಂದರಿಂದ ಎರಡು ಗಂಟೆಗಳ ಕಾಲ ನಿದ್ರೆ ಮಾಡಿ.


👉 3-5 ವರ್ಷಗಳು

ಮೂರರಿಂದ ಐದು ವರ್ಷದ ಮಕ್ಕಳು 10 ರಿಂದ 13 ಗಂಟೆಗಳ ಕಾಲ ಮಲಗಬೇಕು. ಸರಿಯಾದ ನಿದ್ರೆ ಇಲ್ಲದಿದ್ದರೆ, ಅವರ ನಡವಳಿಕೆ ಮತ್ತು ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.


👉 6-13 ವರ್ಷಗಳು

6 ರಿಂದ 13 ವರ್ಷ ವಯಸ್ಸಿನ ಮಕ್ಕಳು ಒಂಬತ್ತು ರಿಂದ 11 ಗಂಟೆಗಳ ಕಾಲ ಮಲಗಬೇಕು. ಹಾಗೆ ಮಲಗುವುದರಿಂದ ಅವರ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರುವುದಿಲ್ಲ. ಆರೋಗ್ಯವಂತರಾಗಿರುತ್ತಾರೆ.


👉 14-17 ವರ್ಷಗಳು

14 ರಿಂದ 17 ವರ್ಷ ವಯಸ್ಸಿನ ಮಕ್ಕಳು ರಾತ್ರಿ ಎಂಟರಿಂದ ಹತ್ತು ಗಂಟೆಗಳ ಕಾಲ ಮಲಗುವುದು ಒಳ್ಳೆಯದು. ಹೀಗೆ ಮಲಗಿದರೆ ಏಕಾಗ್ರತೆ ಹೆಚ್ಚುತ್ತದೆ. ಮೂಡ್ ಸ್ವಿಂಗ್ಸ್, ಆತಂಕ, ಖಿನ್ನತೆಯಂತಹ ಯಾವುದೇ ಸಮಸ್ಯೆಗಳು ಇರುವುದಿಲ್ಲ.


👉 18-25 ವರ್ಷಗಳು

18 ರಿಂದ 25 ವರ್ಷ ವಯಸ್ಸಿನವರು ಏಳರಿಂದ ಒಂಬತ್ತು ಗಂಟೆಗಳ ಕಾಲ ಮಲಗಬೇಕು. ಸರಿಯಾದ ನಿದ್ರೆಯ ಕೊರತೆಯು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.


👉 26-64 ವರ್ಷಗಳು

26 ರಿಂದ 64 ವರ್ಷ ವಯಸ್ಸಿನ ಜನರು ಏಳರಿಂದ ಒಂಬತ್ತು ಗಂಟೆಗಳ ಕಾಲ ಮಲಗಬೇಕು. ಏಳು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗಬಹುದು ಮತ್ತು ದೀರ್ಘಕಾಲದ ಸಮಸ್ಯೆಗಳಿಗೆ ಕಾರಣವಾಗಬಹುದು.


👉 65+

65 ವರ್ಷ ಮೇಲ್ಪಟ್ಟವರು 7 ರಿಂದ 8 ಗಂಟೆಗಳ ಕಾಲ ನಿದ್ರಿಸಬೇಕು. ಹೀಗೆ ಸರಿಯಾಗಿ ನಿದ್ದೆ ಮಾಡಿದರೆ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ.

0 Comments

Post a Comment

Post a Comment (0)

Previous Post Next Post